ಉದಯವಾಹಿನಿ, ಕೋಲಾರ: ಅಮೆರಿಕದ ಫೂಂಡಾ ಚೆಕ್ಕಾಸ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಕೋಲಾರದ ಗಾಂಧಿನಗರ ಬಡಾವಣೆಯ ಬಾಡಿ ಬಿಲ್ಡರ್ ಒಬ್ಬರು ಮೃತಪಟ್ಟಿದ್ದಾರೆ. ನಗರದ ನಿವಾಸಿ ಸುರೇಶ್ ಬಾಬು (42) ಮೃತ ದುರ್ದೈವಿ. ಇವರು ಗಾಂಧಿನಗರದ ಚಲಪತಿ ಹಾಗೂ ಮುನಿಯಮ್ಮ ದಂಪತಿಯ ಪುತ್ರ. ಸುರೇಶ್, ಮೂರು ದಿನಗಳ ಹಿಂದೆ ಫ್ಲೋರಿಡಾದಿಂದ ಟೆಕ್ಸಾಸ್‍ಗೆ ತೆರಳುವಾಗ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನಟಿ ಪ್ರೇಮ, ಪ್ರಿಯಾಮಣಿ ಮತ್ತಿತರ ಜೊತೆ ಮಾಡಲಿಂಗ್‌ನಲ್ಲಿ ಪೋಸ್‌ ಕೊಟ್ಟಿದ್ದ ಸುರೇಶ್ ಬಾಬು ಉಪ್ಪಿ 2 ಮತ್ತು ಇತರ ಚಲನಚಿತ್ರಗಳಲ್ಲಿಯೂ ನಟಿಸಿದ್ದರು. ಫಿಜಿಯೋಥೆರಪಿಸ್ಟ್ ಆಗಿ ತಮ್ಮದೇ ಸ್ವಂತ ಉದ್ಯಮ ಆರಂಭಿಸಿದ್ದರು. ಹಲವು ನಟ ನಟಿಯರಿಗೆ ದೈಹಿಕ ತರಬೇತಿಯನ್ನೂ ಸಹ ಅವರು ನೀಡಿದ್ದರು. ಅವರು ದೆಹಲಿ ಮೂಲದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಅವರು, ಕೆಲ ದಿನಗಳ ಹಿಂದೆಯಷ್ಟೇ ಕೋಲಾರಕ್ಕೆ ಆಗಮಿಸಿ ಪತ್ನಿ ಮತ್ತು ಮಕ್ಕಳನ್ನು ಅಮೆರಿಕಕ್ಕೆ ಕರೆದೊಯ್ದಿದ್ದರು.

Leave a Reply

Your email address will not be published. Required fields are marked *

error: Content is protected !!