ಉದಯವಾಹಿನಿ, ಪಿಟ್ಸ್‌ಬರ್ಗ್: ಮೋಟೆಲ್ ನಲ್ಲಿ ತಂಗಿದ್ದ ವ್ಯಕ್ತಿಯು ಭಾರತೀಯ ಮೂಲದ ಮೋಟೆಲ್ ಮಾಲೀಕನ ಮೇಲೆ ಗುಂಡು ) ಹಾರಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಮೋಟೆಲ್ ಮಾಲೀಕ ರಾಕೇಶ್ ಎಹಗಾಬನ್ (51) ಎಂಬವರಿಗೆ ಗುಂಡು ಹಾರಿಸಿದ ಬಳಿಕ ಆರೋಪಿಯು ಬಳಿಕ ಬನ್ ಅವರ ಬಳಿ ನೀವು ಚೆನ್ನಾಗಿದ್ದೀರಾ, ಬಡ್? ಎಂದು ಕೇಳಿದ್ದಾನೆ ಎನ್ನಲಾಗಿದೆ. ರಾಕೇಶ್ ಎಹಗಾಬನ್ ಅವರಿಗೆ ಗುಂಡು ಹಾರಿಸುವ ಮೊದಲು ಆರೋಪಿಯು ತನ್ನೊಂದಿಗೆ ಇದ್ದ ಮಹಿಳೆ ಮೇಲೂ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.ಸುಮಾರು ಎರಡು ವಾರಗಳ ಮೊದಲು ಮೋಟೆಲ್‌ನಲ್ಲಿ ತಂಗಿದ್ದ ಆರೋಪಿಯು ಮಹಿಳೆ ಮತ್ತು ಮಗುವಿನೊಂದಿಗೆ ತಂಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಮೇಲೆ ಶುಕ್ರವಾರ ಗುಂಡು ಹಾರಿಸಿದ ಆರೋಪಿಯು ಬಳಿಕ ರಾಕೇಶ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮೋಟೆಲ್ ಮಾಲೀಕ ರಾಕೇಶ್ ಎಹಗಾಬನ್ ಅವರು ಮಹಿಳೆ ಮತ್ತು ಆರೋಪಿಯ ನಡುವೆ ನಡೆಯುತ್ತಿದ್ದ ವಿವಾದವನ್ನು ಪರಿಶೀಲಿಸಲು ಹೋದಾಗ ಈ ಘಟನೆ ನಡೆದಿದೆ. ಪಾರ್ಕಿಂಗ್ ಸ್ಥಳದಲ್ಲಿ ನಡೆಯುತ್ತಿದ್ದ ಗದ್ದಲ ಕೇಳಿ ಅಲ್ಲಿಗೆ ಬಂದ ರಾಕೇಶ್ ತಲೆಗೆ ಶೂಟ್ ಮಾಡಿದ ಆರೋಪಿ ಬಳಿಕ ಅವರ ಬಳಿಗೆ ಬಂದು ನೀವು ಚೆನ್ನಾಗಿದ್ದೀರಾ ಬಡ್? ಎಂದು ಕೇಳಿದ್ದನು. ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಕೇಶ್ ಮೇಲೆ ದಾಳಿ ನಡೆಸಿದ ವ್ಯಕ್ತಿಯನ್ನು ಸ್ಟಾನ್ಲಿ ಯುಜೀನ್ ವೆಸ್ಟ್ (37) ಎಂದು ಗುರುತಿಸಲಾಗಿದೆ. ಘಟನೆಯ ಪೂರ್ತಿ ದೃಶ್ಯಾವಳಿಯು ಮೋಟೆಲ್ ನ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಆರೋಪಿ ಸ್ಟಾನ್ಲಿ ಯುಜೀನ್ ವೆಸ್ಟ್ ಸುಮಾರು ಎರಡು ವಾರಗಳ ಮೊದಲು ಮಹಿಳೆ ಮತ್ತು ಮಗುವಿನೊಂದಿಗೆ ಮೋಟೆಲ್‌ಗೆ ಬಂದು ತಂಗಿದ್ದನು. ಎಹಗಾಬನ್ ಮೇಲೆ ಗುಂಡು ಹಾರಿಸುವ ಮೊದಲು ಆತ ಮೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
