ಉದಯವಾಹಿನಿ : ಬಿಗ್ ಬಾಸ್ ಮನೆಗೆ ರಜತ್ ಮತ್ತು ಚೈತ್ರಾ ಕುಂದಾಪುರ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಬಂದ ಕೂಡಲೇ ಗಿಲ್ಲಿಯನ್ನೇ ಟಾರ್ಗೆಟ್ ಮಾಡಿದ್ದಾರೆ. ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳು ವರ್ಸಸ್ ಗಿಲ್ಲಿ ಜಟಾಪಟಿ ನಡೆದಿದೆ. ಕಿಚ್ಚನ ಪಂಚಾಯ್ತಿಯಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರಗೆ ಸುದೀಪ್ ಒಂದು ಟಾಸ್ಕ್ ಕೊಟ್ಟರು. ಗಿಲ್ಲಿ ಮನೆಗೆ ಫೋನ್ ಕರೆ ಮಾಡಿ, ಆತನ ವಿರುದ್ಧ ಮಾತಾಡ್ಬೇಕು. ಅದಕ್ಕೆ ಕೌಂಟರ್ ಆಗಿ ಅವರಿಬ್ಬರ ಮನೆಗೆ ಗಿಲ್ಲಿ ಕಾಲ್ ಮಾಡಿ ಮಾತಾಡ್ಬೇಕು.
ರಜತ್ ಮೊದಲು ಕಾಲ್ ಮಾಡಿ, ‘ಗಿಲ್ಲಿಯದ್ದು ಬರೀ ಮಾತು.. ಯಾವಾಗ್ಲೋ ಆಡ್ತೀಯ ಆಟ.. ಆಟ ಆಡು ಫಸ್ಟು, ಆಮೇಲೆ ಮಾತಾಡುವೆಯಂತೆ’ ಅಂತ ಕಂಪ್ಲೇಟ್ ಮಾಡಿದರು. ಅದಕ್ಕೆ ಗಿಲ್ಲಿ ಕೌಂಟರ್ ಆಗಿ, ‘ರಜತ್ ಬರುವಾಗ ಸಖತ್ ಮಾಸ್ ಆಗಿ ಬಂದ್ರು, ಈಗ ಸ್ವಲ್ಪ ಠುಸ್ ಆಗಿದ್ದಾರೆ. ಗೇಮ್‌ನಲ್ಲಿ ತೋರಿಸ್ತೀನಿ ಅಂತಿದ್ದಾರೆ. ನಾನು ಗೇಮ್‌ನಲ್ಲಿ ತೋರಿಸ್ತೀನಿ’ ಅಂತ ತಿರುಗೇಟು ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ ಮಾತನಾಡಿ, ‘ಗಿಲ್ಲಿ ಮಾತಾಡ್ಬೇಕೋ ಬೇಡ್ವೋ ಅಂತ ಪೂರ್ತಿ ಸೈಲೆಂಟ್ ಆಗಿ ಕೂತಿದ್ದಾನೆ’ ಅಂತ ಟಾಂಗ್ ಕೊಡ್ತಾರೆ. ಅದಕ್ಕೆ ಗಿಲ್ಲಿ, ‘ನಾನು ಮಾತಾಡುದ್ರೆ ಎಲ್ಲಿ ಇವರು ಹೋಗಿಬಿಡ್ತಾರೋ ಅಂತ ಸುಮ್ನೆ ಇದ್ದೇನೆ’ ಅಂತ ಕೌಂಟರ್ ಕೊಡ್ತಾರೆ. ಈ ಮೂವರ ನಡುವಿನ ಮಾತಿನ ಜುಗಲ್‌ಬಂದಿ ವೀಕ್ಷಕರಿಗೆ ಮಜಾ ಕೊಡ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳು ಗಿಲ್ಲಿನ ಕಟ್ಟಿ ಹಾಕ್ತಾರಾ? ಅಥವಾ ಮಾತಿನ ಮಲ್ಲ ಗಿಲ್ಲಿಯೇ ಅವರ ಬಾಯಿ ಮುಚ್ಚಿಸ್ತಾರಾ? ಮುಂದೆ ಹೇಗಿರುತ್ತೆ ಇವರ ಆಟ ಎಂಬುದನ್ನು ಕಾದು ನೋಡಬೇಕಿದೆ.
