ಉದಯವಾಹಿನಿ, ದೆಹಲಿ : ಗಂಡ-ಹೆಂಡತಿ ಅಂದ ಮೇಲೆ ಸಣ್ಣ ಪುಟ್ಟ ಜಗಳಗಳು ಸಾಮಾನ್ಯ. ಆದರೆ ಕೆಲವೊಮ್ಮೆ ಇಂತಹ ಸಣ್ಣ ವಿಚಾರದ ಜಗಳವೇ ದೊಡ್ಡದಾಗಿ ಸಮಸ್ಯೆ ಉಂಟಾಗುತ್ತದೆ. ಅಂತಹದ್ದೇ ಘಟನೆಯೊಂದು ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ಖುಷಿಯಿಂದ ನೃತ್ಯ ಮಾಡುತ್ತಿದ್ದ ಪತ್ನಿಗೆ ಪತಿಯೊಬ್ಬ ಕಪಾಳ ಮೋಕ್ಷ ಮಾಡಿದ ಅಘಾತಕಾರಿ ಘಟನೆ ಇದಾಗಿದೆ. ಮದುವೆ ಸಮಾರಂಭದಲ್ಲಿ ಅತಿಥಿಗಳ ಸಮ್ಮುಖದಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕೆಯ ಪತಿ ಪ್ರತ್ಯಕ್ಷಗೊಂಡು ಪತ್ನಿಗೆ ಒದ್ದು ಕಪಾಳಮೋಕ್ಷ ಮಾಡಿದ್ದಾನೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ಆತನ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮದುವೆಯ ಸಂಭ್ರಮದ ವಾತಾವರಣದಲ್ಲಿ ಮೆರವಣಿಗೆ ನಡೆಯುತ್ತಿತ್ತು. ಇದರಲ್ಲಿ ವಧುವಿನ ಕಡೆಯ ಅತಿಥಿಗಳೊಂದಿಗೆ ಮಹಿಳೆಯೊಬ್ಬರು ಭಾರೀ ಖುಷಿಯಿಂದ ತನ್ನ ಪಾಡಿಗೆ ನೃತ್ಯ ಮಾಡುತ್ತಿದ್ದರು. ಈ ವೇಳೆ ಪತಿ ಹಲ್ಲೆ ನಡೆಸಿದ್ದಾನೆ. ವಿಡಿಯೊದಲ್ಲಿ ಆತ ತನ್ನ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಸರಿಯಾಗಿ ಕಪಾಳ ಮೋಕ್ಷ ಮಾಡಿದ್ದಾನೆ.
