ಉದಯವಾಹಿನಿ, ಭೂತಾನ್: ಭೂತಾನ್ಗೆ ಭಾರತೀಯರಿಗೆ ವೀಸಾ ಇಲ್ಲದೆ ಪ್ರವೇಶವನ್ನು ನೀಡುತ್ತದೆ. ನವೆಂಬರ್ ತಿಂಗಳಿಂದ ಫೆಬ್ರವರಿವರೆಗೆ ಭೇಟಿ ನೀಡಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಇಲ್ಲಿನ ವಾತಾವರಣವು ಶಾಂತಿಯುತವಾಗಿರುತ್ತದೆ. ಈ ದೇಶಕ್ಕೆ ಬರುವ ಪ್ರವಾಸಿಗರು ಎಮಾ ದತ್ಶಿ, ಮೊಮೊಸ್, ಒಣಗಿದ ಮೆಣಸಿನಕಾಯಿಯಂತಹ ಭಕ್ಷ್ಯಗಳನ್ನು ಆನಂದಿಸುತ್ತಾರೆ. ಭೂತಾನ್‌ನಲ್ಲಿ ಬಜೆಟ್ ಪ್ರಕಾರ, ಹೋಂಸ್ಟೇಗಳ ದರ ₹4,000 ರಿಂದ ₹8,000 ವರೆಗೆ ಇರುತ್ತದೆ.
ಮಾಲ್ಡೀವ್ಸ್: ಭಾರತೀಯರು ಮಾಲ್ಡೀವ್ಸ್ಗೆ ವೀಸಾ ಇಲ್ಲದೆಯೇ ಭೇಟಿ ನೀಡಬಹುದು. ಜನವರಿಯಿಂದ ಫೆಬ್ರವರಿ ಅವಧಿಯಲ್ಲಿ ಮಾಲ್ಡೀವ್ಸ್ಗೆ ಭೇಟಿ ನೀಡಲು ಉತ್ತಮ. ಪ್ಯಾಡಲ್‌ಬೋರ್ಡಿಂಗ್ ಹಾಗೂ ಸೂರ್ಯಾಸ್ತದ ಕ್ರೂಸ್ ಅನ್ನು ಅನುಭವಿಸಬಹುದು. ಇಲ್ಲಿರುವ ವಿಶಿಷ್ಟ ಅಡುಗೆಗಳು ಖಂಡಿತವಾಗಿಯು ನಿಮ್ಮ ಹೃದಯವನ್ನು ಗೆಲ್ಲುತ್ತದೆ. ಇಲ್ಲಿ ಪ್ರತಿ ರಾತ್ರಿಗೆ ಹೋಟೆಲ್‌ಗಳ ದರವು ₹8,000 ರಿಂದ ₹50,000 ವರೆಗೆ ಇರುತ್ತದೆ.
ಥೈಲ್ಯಾಂಡ್: ಈ ಥೈಲ್ಯಾಂಡ್ ದೇಶವು 30 ದಿನಗಳವರೆಗೆ ವೀಸಾ ಇಲ್ಲದೇ ಪ್ರವೇಶವನ್ನು ನೀಡುತ್ತದೆ. ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಭೇಟಿ ನೀಡಲು ಉತ್ತಮ ಸಮಯವಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ತಾಪಮಾನವು 25 ರಿಂದ 30 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ. ಈ ಸಮಯದಲ್ಲಿ ಆರ್ದ್ರತೆಯು ಕಡಿಮೆಯಿರುವುದರಿಂದ ಆಹ್ಲಾದಕರ ವಾತಾವರಣದಲ್ಲಿ ಹೊರಾಂಗಣವನ್ನು ಅನ್ವೇಷಿಸಲು ಸುಲಭವಾಗುತ್ತದೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈನಿಂದ ಥೈಲ್ಯಾಂಡ್‌ಗೆ ವಿಮಾನಗಳು ಸುಲಭವಾಗಿ ಲಭ್ಯ ಇವೆ. ಕಡಿಮೆ ಬಜೆಟ್‌ನಿಂದ ಐಷಾರಾಮಿವರೆಗೆ ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಇಲ್ಲಿವೆ.
ಮಾರಿಷಸ್: ಚಳಿಗಾಲದ ಪ್ರವಾಸಕ್ಕೆ ವೀಸಾ ರಹಿತವಾಗಿ ತೆರಳಲು ಮಾರಿಷಸ್ ಉತ್ತಮ ತಾಣಗಳಲ್ಲಿ ಒಂದಾಗಿದೆ. ಬೆಳಗಿನ ಎಳೆ ಬಿಸಿಲು ಮತ್ತು ಮಧ್ಯಾಹ್ನದ ಲಘು ಮಳೆಯು ನಿಮ್ಮ ಪ್ರವಾಸಕ್ಕೆ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ಪ್ರಮುಖ ಭಾರತೀಯ ನಗರಗಳಿಂದ ನೇರ ವಿಮಾನಗಳು ಸುಮಾರು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇಲ್ಲಿನ ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳಲ್ಲಿ ದರ ₹4,000 ರಿಂದ ₹15,000 ವರೆಗೆ ಇರುತ್ತದೆ.
ಸೀಶೆಲ್ಸ್: ಭಾರತೀಯರಿಗೆ ಸೀಶೆಲ್ಸ್ 90 ದಿನಗಳವರೆಗೆ ವೀಸಾ ಇಲ್ಲದೇ ಪ್ರವೇಶವನ್ನು ನೀಡುತ್ತದೆ. ದೆಹಲಿ ಮತ್ತು ಮುಂಬೈನಂತಹ ಪ್ರಮುಖ ನಗರಗಳಿಂದ ವಿಮಾನಗಳು ಇಲ್ಲಿಗೆ ತಲುಪಲು ಸುಮಾರು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಸೀಶೆಲ್ಸ್‌ನಲ್ಲಿ ಬೆರಗುಗೊಳಿಸುವ ಕಡಲತೀರಗಳು, ಸ್ಥಳೀಯ ಕೆಫೆಗಳು ಮತ್ತು ನೀರಿನ ಕ್ರೀಡೆಗಳನ್ನು ಆನಂದಿಸಬಹುದು. ಇಲ್ಲಿನ ಅತಿಥಿಗೃಹಗಳು ₹5,000 ರಿಂದ ಪ್ರಾರಂಭವಾಗುತ್ತವೆ. ಐಷಾರಾಮಿ ರೆಸಾರ್ಟ್‌ಗಳಿಗೆ ₹25,000 ವರೆಗೆ ವೆಚ್ಚವಾಗುತ್ತದೆ.
