ಉದಯವಾಹಿನಿ, ಕಾಂತಾರ ಚಾಪ್ಟರ್-1ʼ ಮೂಲಕ ಭಾರೀ ಜನಪ್ರಿಯತೆ ಗಳಿಸಿರುವ ನಟಿ ರುಕ್ಮಿಣಿ ವಸಂತ್ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ವಿಶೇಷ ಅಂದ್ರೆ ಮುಂಬೈನಲ್ಲೇ ವಿಶೇಷವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಡಿಸೆಂಬರ್ 10 ರಂದು ರುಕ್ಮಿಣಿ ತಮ್ಮ ಹುಟ್ಟುಹಬ್ಬವನ್ನ y) ಫ್ರೆಂಡ್ಸ್ ಹಾಗೂ ಮುಂಬೈ ಪಾಪರಾಜಿಗಳ ಜೊತೆ ಆಚರಿಸಿಕೊಂಡಿದ್ದು, ಬಳಿಕ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಬಿಟೌನ್ ಬೀಟ್‌ನಲ್ಲಿರುವ ರುಕ್ಮಿಣಿ ಬರ್ತ್‌ಡೇ ದಿನ ವಿಭನ್ನ ಲುಕ್‌ನಲ್ಲಿ ಕಾಣಿಸ್ಕೊಂಡ್ರು. ತಲೆಗೆ ಸ್ಕಾರ್ಪ್ ಧರಿಸಿ ವಿಭಿನ್ನವಾಗಿ ಪಾಪರಾಜಿಗಳ ಫಳ ಫಳ ಎಂದಿದ್ದಾರೆ. ಕಾಂತಾರ ಸಕ್ಸಸ್ ಬಳಿಕ ಮುಂಬೈನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ರುಕ್ಮಿಣಿಗೆ ಹಿಂದಿ ಚಿತ್ರದ ಆಫರ್‌ಗಳು ಬರ್ತಿದೆ ಎಂಬ ಸುದ್ದಿ ಇದೆ. ಕಾಂತಾರ ಬಳಿಕ ರುಕ್ಮಿಣಿ ವಸಂತ್ ಅವರ ಯಾವುದೇ ಚಿತ್ರ ಘೋಷಣೆ ಆಗಿಲ್ಲ. ಇದೀಗ ಮುಂಬೈನಲ್ಲಿ ರುಕ್ಮಿಣಿ ಕಲರವ ನೋಡ್ತಿದ್ರೆ ಮತ್ತೆ ಕನ್ನಡಕ್ಕೆ ಬರ್ತಾರಾ ಅಥವಾ ರಶ್ಮಿಕಾ ಶ್ರೀಲೀಲಾರಂತೆ ಮರೀಚಿಕೆ ಆಗ್ತಾರಾ ಕಾಲ ಉತ್ತರ ಕೊಡಬೇಕು.
