ಉದಯವಾಹಿನಿ, ಶಹಜಹಾನ್ಪುರ: ಆಸಿಡ್ ದಾಳಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಶಿವಪುರಿ ಜಿಲ್ಲೆಯ ಗಾಯತ್ರಿ ಶಕ್ತಿಪೀಠದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಾಧುವಿನ ವೇಷದಲ್ಲಿದ್ದ ಆತನಿಗೆ 1986ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಸುಮಾರು 37 ವರ್ಷಗಳ ಹಿಂದೆ ಜಾಮೀನು ಪಡೆದಿದ್ದ ಆತ ಬಳಿಕ ತಲೆಮರೆಸಿಕೊಂಡಿದ್ದು, ಶಿವಪುರಿ ಜಿಲ್ಲೆಯ ಗಾಯತ್ರಿ ಶಕ್ತಿಪೀಠದಲ್ಲಿ ಸಾಧುವಿನ ವೇಷದಲ್ಲಿ ತಿರುಗಾಡುತ್ತಿದ್ದನು. ಬಂಧಿತ ಅಪರಾಧಿಯನ್ನು ರಾಜೇಶ್ ಅಲಿಯಾಸ್ ರಾಜು ಎಂದು ಗುರುತಿಸಲಾಗಿದೆ.

1986 ಆಗಸ್ಟ್ ನಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯ ತಿಲ್ಹಾರ್ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ತಮ್ಮ ಆಭರಣದ ಅಂಗಡಿಗೆ ಕ್ಯಾಶಿಯರ್ ಗಂಗಾದೀನ್ ಮತ್ತು ಓಂ ಪ್ರಕಾಶ್ ರಸ್ತೋಗಿ ಅವರು ಆಭರಣಗಳನ್ನು ಸ್ವಚ್ಛಗೊಳಿಸುವ ಆಸಿಡ್ ಬಾಟಲಿಯನ್ನು ಹಿಡಿದುಕೊಂಡು ಆಟೋದಲ್ಲಿ ಹೋಗುತ್ತಿದ್ದರು. ಈ ವೇಳೆ ರಾಜೇಶ್ ಎಂಬಾತ ಅವರನ್ನು ತಡೆದು ಥಳಿಸಿದ್ದಾನೆ. ಅಲ್ಲದೆ ಅವರ ಕೈಯಿಂದ ಆಸಿಡ್ ಬಾಟಲಿಯನ್ನು ಕಸಿದುಕೊಂಡು ಅವರಿಬ್ಬರ ಮೇಲೂ ಎಸೆದಿದ್ದಾನೆ. ಇದರಿಂದ ಅವರಿಬ್ಬರು ತೀವ್ರವಾಗಿ ಗಾಯಗೊಂಡಿದ್ದರು.

ಈ ಬಳಿಕ ಗಂಗಾದೀನ್ ನೀಡಿದ ದೂರಿನಂತೆ ರಾಜೇಶ್ ವಿರುದ್ಧ ಐಪಿಸಿ ಸೆಕ್ಷನ್ 326 ಮತ್ತು 307ರ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. 1988ರ ಮೇ 30ರಂದು ಆತನನ್ನು ಅಪರಾಧಿ ಎಂದು ಘೋಷಿಸಿ ಕೊಲೆ ಯತ್ನಕ್ಕಾಗಿ ಏಳು ವರ್ಷಗಳ ಕಾಲ ಜೈಲು ಶಿಕ್ಷೆಯೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಈ ಬಳಿಕ ಹೈಕೋರ್ಟ್ ಆತನಿಗೆ ಜಾಮೀನು ನೀಡಿದ್ದು, ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದುದರಿಂದ ಆತನ ಬಂಧನಕ್ಕೆ ವಾರಂಟ್ ಹೊರಡಿಸಲಾಯಿತು. ಸಾಧುವಿನ ವೇಷಧಾರಣೆ ಮಾಡಿಕೊಂಡು ನೆರೆಯ ಜಿಲ್ಲೆಗಳ ಧಾರ್ಮಿಕ ಸ್ಥಳಗಳಲ್ಲಿ ಸುತ್ತಾಡುತ್ತಿದ್ದ ಈತ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ. ಕೊನೆಗೆ ಆತನನ್ನು ಮಧ್ಯಪ್ರದೇಶದ ಶಿವಪುರಿಯ ಗಾಯತ್ರಿ ಶಕ್ತಿಪೀಠದಲ್ಲಿ ಪತ್ತೆ ಹಚ್ಚಲಾಗಿದೆ. ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆಯಲ್ಲಿ ಆತನ ಬೆರಳಚ್ಚು ದಾಖಲಾಗಿದ್ದು, ಇದು ಪೊಲೀಸ್ ಪೋರ್ಟಲ್‌ನಲ್ಲಿರುವ ಬೆರಳಚ್ಚು ದಾಖಲೆಗಳಿಗೆ ಹೊಂದಿಕೊಂಡಿದ್ದರಿಂದ ಆತನ ಬಂಧನ ಸಾಧ್ಯವಾಯಿತು ಎಂದು ಗಳು ಸೇರಿದಂತೆ ಸುಧಾರಿತ ವಿಶೇಷ ಕಣ್ಗಾವಲು ಸಾಧನಗಳ ಬಳಕೆಯಿಂದಾಗಿ ಬಂಧನ ಸಾಧ್ಯವಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!