ಉದಯವಾಹಿನಿ, ನವದೆಹಲಿ: ʻಇಂದು ನನ್ನ ಮಗನಿಗೆ 8 ಗಂಟೆಯ ಆಪರೇಷನ್ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್ ಮಾಡಿ ಬಹಳ ಮುಖ್ಯವಾದ ಆಪರೇಷನ್, ಬರಲೇಬೇಕು ಅಂತ ಹೇಳಿದ್ರು. ನಾನು ಅದಕ್ಕೆ ಗಡಿಯಲ್ಲಿ ಸೈನಿಕರು ಜೀವ ಬಲಿ ಕೊಡ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ರು. ಅವರ ತ್ಯಾಗದ ಮುಂದೆ ನಮ್ಮದೇನು..? ಅಂತ ಹೇಳಿ ದೇಶಕ್ಕಾಗಿ ನಾನು ಇಲ್ಲಿಯೇ ಉಳಿದೆ..ʼ ʻವೋಟ್ ಚೋರಿʼ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಡಿದ ಭಾವುಕ ನುಡಿಗಳಿವು
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಮಗನಿಗೆ ಏನಾದ್ರೂ ಪರ್ವಾಗಿಲ್ಲ ಅಂತ ಗೇಳಿದ ದೇಶದ 140 ಕೋಟಿ ಜನರಿಗಾಗಿ ನಾನು ಇಲ್ಲೇ ಉಳಿಯಲು ನಿರ್ಧರಿಸಿದೆ ಎಂದರು.
ಮುಂದುವರಿದು.. ನಾವು ಸೋತಿದ್ದೇವೆ, ಆದ್ರೆ ನಮ್ಮ ಸಿದ್ಧಾಂತ ಬದುಕಿದೆ. ಮೋದಿ ಒಮ್ಮೆ ಸೋತರೆ ಅವರ ಹೆಸರೂ ಎಲ್ಲೂ ಇರಲ್ಲ. ನಾವು 10 ಬಾರಿ ಸೋತರೂ ಬದುಕಿದ್ದೇವೆ, ಹೋರಾಟಕ್ಕೆ ಸಿದ್ಧರಿದ್ದೇವೆ. ವಂದೇ ಮಾತರಂ ಕೂಡ ನಮ್ಮಿಂದ ಕದ್ದಿದ್ದಾರೆ. ಆ ಕಳ್ಳರ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಕಿವಿಮಾತು ಹೇಳಿದರು.
