ಉದಯವಾಹಿನಿ, ಕೋಲ್ಕತ್ತಾ: ಫುಟ್ಬಾಲ್ ಐಕಾನ್ ಲಿಯೊನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಉಂಟಾದ ಅವ್ಯವಸ್ಥೆಯ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕ್ರೀಡಾಕೂಟವನ್ನು ಹಾಳುಮಾಡಲು ಬೇರೂರಿರುವ ವಿಐಪಿ ಸಂಸ್ಕೃತಿಯೇ ಕಾರಣ ಎಂದು ಶರ್ಮಾ ಆರೋಪಿಸಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಮೆಸ್ಸಿಯ ‘ಗೋಟ್ ಟೂರ್ 2025’ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ಉಲ್ಲೇಖಿಸಿದ ಶರ್ಮಾ, ಹೊಣೆಗಾರಿಕೆ ಮೇಲಿನಿಂದ ಪ್ರಾರಂಭವಾಗಬೇಕು. ರಾಜ್ಯದ ಗೃಹ ಸಚಿವರು (ಸಿಎಂ ಮಮತಾ ಬ್ಯಾನರ್ಜಿ ಗೃಹ ಸಚಿವರೂ ಹೌದು) ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರನ್ನು ಬಂಧಿಸಬೇಕಿತ್ತು. ಆದರೆ, ಅವರು ಕಾರ್ಯಕ್ರಮ ಆಯೋಜಕರ ಬಂಧನವನ್ನು ಸಮರ್ಥಿಸುತ್ತಿಲ್ಲ.. ಮೊದಲ ಜವಾಬ್ದಾರಿ ರಾಜ್ಯದ ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರು ಹೊರಬೇಕು ಎಂದು ಪ್ರತಿಪಾದಿಸಿದ್ದಾರೆ.
