ಉದಯವಾಹಿನಿ, ಜೆರುಸಲೆಮ್: ಕದನ ವಿರಾಮ ಘೋಷಣೆಯ ನಡುವೆಯೂ ಗಾಜಾದ ಮೇಲೆ ದಾಳಿ ಇಸ್ರೇಲ್​ ದಾಳಿ ಮುಂದುವರಿಸಿದೆ. ಗಾಜಾ ಪಟ್ಟಿಯಲ್ಲಿ ಇತ್ತೀಚೆಗೆ ಸ್ಫೋಟಕ ಸಿಡಿದ ಘಟನೆಯಲ್ಲಿ ತನ್ನ ಇಬ್ಬರು ಸೈನಿಕರು ಗಾಯಗೊಂಡ ಬಳಿಕ ನಡೆಸಿದ ಕಾರ್ಯಾಚರಣೆಯಲ್ಲಿ ಹಮಾಸ್​ನ ಉನ್ನತ ಕಮಾಂಡರ್​ ಒಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್​ ಹೇಳಿಕೊಂಡಿದೆ.
ರಯೀದ್ ಸಾದ್ ಎಂಬಾತನನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್​ ಹೇಳಿದರೆ, ಇದನ್ನು ಹಮಾಸ್​ ಉಗ್ರರು ಇದನ್ನು ದೃಢಪಡಿಸಿಲ್ಲ. ಗಾಜಾ ನಗರದ ಹೊರಗೆ ನಾಗರಿಕ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಇದು ಅಕ್ಟೋಬರ್ 10ರಿಂದ ಜಾರಿಯಾದ ಕದನ ವಿರಾಮದ ಉಲ್ಲಂಘನೆ ಎಂದು ಟೀಕಿಸಿದೆ.
ಇಸ್ರೇಲ್​ ಸೇನೆ ಹೇಳೋದೇನು?: ತನ್ನ ದಾಳಿಯಲ್ಲಿ ರಯೀದ್​ ಸಾದ್​ ಮೃತಪಟ್ಟಿದ್ದಾನೆ. ಈತ ಹಮಾಸ್​ನ ಶಸ್ತ್ರಾಸ್ತ್ರ ತಯಾರಿಕೆಯ ವಿಭಾಗದ ಹಮಾಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ. ಈ ಹಿಂದೆ ಉಗ್ರಗಾಮಿ ಗುಂಪಿನ ಕಾರ್ಯಾಚರಣೆ ವಿಭಾಗದ ನೇತೃತ್ವ ವಹಿಸಿದ್ದ. ಅಕ್ಟೋಬರ್ 7 ರಂದು ಇಸ್ರೇಲ್​ ಮೇಲೆ ದಾಳಿ ನಡೆಸಿದ ರೂವಾರಿಗಳಲ್ಲಿ ಈತನೂ ಒಬ್ಬ. ಕದನ ವಿರಾಮವನ್ನು ಉಲ್ಲಂಘಿಸಿ ಭಯೋತ್ಪಾದಕ ಸಂಘಟನೆಯನ್ನು ಪುನರ್ನಿರ್ಮಿಸುವಲ್ಲಿ ಈತ ತೊಡಗಿಸಿಕೊಂಡಿದ್ದ ಎಂದು ಇಸ್ರೇಲ್​ ಸೇನೆ ಹೇಳಿದೆ.ಗಾಜಾ ನಗರದ ಪಶ್ಚಿಮದಲ್ಲಿ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಶಿಫಾ ಆಸ್ಪತ್ರೆಗೆ ತರಲಾಗಿದೆ ಎಂದು ಮಾಧ್ಯಮವೊಂದರ ಪತ್ರಕರ್ತರೊಬ್ಬರು ತಿಳಿಸಿದ್ದರೆ, ಅಲ್ ಅವ್ಡಾ ಆಸ್ಪತ್ರೆಯ ಪ್ರಕಾರ, ಇನ್ನೂ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕದನ ವಿರಾಮ ಪದೇ ಪದೆ ಉಲ್ಲಂಘನೆ: ಅಮೆರಿಕದ ಮಧ್ಯಸ್ತಿಕೆಯಲ್ಲಿ ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವೆ ಅಕ್ಟೋಬರ್​ 10 ರಂದು ಕದನ ವಿರಾಮ ಘೋಷಿಸಲಾಗಿತ್ತು. ಆದರೆ, ಅದು ನೆಪಮಾತ್ರಕ್ಕೆ ಮಾಡಿಕೊಂಡ ಸಂಧಾನ ಎಂಬಂತಾಗಿದೆ. ಕದನ ವಿರಾಮ ಘೋಷಣೆ ಬಳಿಕವೂ ಹಮಾಸ್​ ಉಗ್ರರು ಮತ್ತು ಇಸ್ರೇಲ್​ ಸೇನೆ ದಾಳಿ ನಡೆಸುತ್ತಲೇ ಇವೆ. ಎರಡೂ ಕಡೆಯಿಂದ ಈ ಬಗ್ಗೆ ಆರೋಪ- ಪ್ರತ್ಯಾರೋಪ ಮಾಡಲಾಗುತ್ತಿದೆ.

ಕದನ ವಿರಾಮ ಜಾರಿಗೆ ಬಂದ ನಂತರ ಗಾಜಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ಮತ್ತು ಗುಂಡಿನ ದಾಳಿಯಲ್ಲಿ ಕನಿಷ್ಠ 386 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ ಎಂದು ಪ್ಯಾಲೆಸ್ಟೀನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!