ಉದಯವಾಹಿನಿ, ಟಾಲಿವುಡ್‌ನ ನಟಿ ಸಮಂತಾ ರುತ್‌ಪ್ರಭು ಹಾಗೂ ನಿರ್ದೇಶಕ ರಾಜ್ ನಿಡಿಮೋರು ಡಿಸೆಂಬರ್ 1ರಂದು ಹಸೆಮಣೆ ಏರಿದ್ದರು. ಮದ್ವೆಯಾದ ಬಳಿಕ ಇಬ್ಬರೂ ಒಟ್ಟಿಗೆ ಹೈದರಾಬಾದ್‌ನ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಏರ್‌ಪೋರ್ಟ್‌ನಲ್ಲಿ ಕೈಹಿಡಿದುಕೊಂಡು ಬರುತ್ತಿರೋ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಇದೇ ಡಿಸೆಂಬರ್ 1ರಂದು ಕೊಯಮತ್ತೂರಿನ ಯೋಗ ಕೇಂದ್ರದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ಸರಳವಾಗಿ ಮರು ವಿವಾಹವಾಗಿದ್ದರು ಸಮಂತಾ. ಕಳೆದ ವರ್ಷವಷ್ಟೇ ತಮ್ಮ ಮಾಜಿ ಪತಿ ನಾಗಚೈತನ್ಯ ಶೋಭಿತಾ ಧುಲಿಪಾಲ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಫ್ಯಾಮಿಲಿ ಮ್ಯಾನ್-2 ಹಾಗೂ ಸಿಟಡೆಲ್ ಹನಿಬನಿ ವೆಬ್ ಸಿರೀಸ್‌ಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ನಿರ್ದೇಶಕ ರಾಜ್ ನಿಡಿಮೋರು ಹಾಗೂ ಸಮಂತಾ ಮದ್ವೆ ಆದ ಬಳಿಕ ಇದೇ ಫಸ್ಟ್ ಟೈಂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಏರ್‌ಪೋರ್ಟ್‌ನಲ್ಲಿ ನಡೆದುಕೊಂಡು ಹೋಗ್ತಿರುವ ಅವರ ವಿಡಿಯೋ ಸಖತ್ ವೈರಲ್ ಆಗಿದ್ದು, ಸಮಂತಾ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
