ಉದಯವಾಹಿನಿ, ʻಗತವೈಭವʼ ಸಿನಿಮಾ ಸಕ್ಸಸ್ ಖುಷಿಯಲ್ಲೀಗ ನಿರ್ದೇಶಕ ಸಿಂಪಲ್ ಸುನಿ ದೇವರು ರುಜು ಮಾಡಿದನು ಚಿತ್ರ ಕೈಗೆತ್ತಿಗೊಂಡಿದ್ದಾರೆ. ಈ ಚಿತ್ರದ ಮೂಲಕ ರಂಗಭೂಮಿ ಕಲಾವಿದ ವಿರಾಜ್ ಹೀರೋ ಆಗಿ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಶೀರ್ಷಿಕೆ ಮೂಲಕ ಕುತೂಹಲ ಹೆಚ್ಚಿಸಿರುವ ದೇವರು ರುಜು ಮಾಡಿದನು ಸಿನಿಮಾದ ಪ್ರಮೋಷನಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ದೇವರು ರುಜು ಮಾಡಿದನು ಸಿನಿಮಾದ ಹ್ಯಾಪಿ ಬರ್ತಡೇ ಹಾಡು ರಿಲೀಸ್ ಮಾಡಲಾಯಿತು. ಈ ಸಂದರ್ಭದಲ್ಲಿ ಗಾಯಕ ಅಂಥೋನಿ ದಾಸ್ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.
ಹಾಡು ಬಿಡುಗಡೆ ಬಳಿಕ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ದೇವರು ರುಜು ಮಾಡಿದನು ಮ್ಯೂಸಿಕಲ್ ಜರ್ನಿ ಸಿನಿಮಾ. ಚಿತ್ರದಲ್ಲಿ ಒಟ್ಟು 12 ಸಾಂಗ್ ಇದೆ. ವಿರಾಜ್ ಅದ್ಭುತ ಡ್ಯಾನ್ಸರ್. ಆಂಥೋನಿ ಸರ್ ನಾನು ನಿಮಗೆ ಋಣಿಯಾಗಿರುತ್ತೇನೆ. ಹಾಡನ್ನು ಪ್ರಮೋಷನ್ ಮಾಡಲು ಇಲ್ಲಿಗೆ ಬಂದಿದ್ದಾರೆ. ನಮಗೆ ಖುಷಿಯಾಗಿದೆ. ಇದಕ್ಕೆ ಹೇಳುವುದು ಸಿನಿಮಾ ದೊಡ್ಡದು. ನಾಗಾರ್ಜುನ್ ಅವರು ಒಳ್ಳೆ ಸಾಹಿತ್ಯ ಕೊಟ್ಟಿದ್ದಾರೆ. ಕೀರ್ತಿ ಅವರು ಅದ್ಭುತ ನಟಿ. ಒಳ್ಳೆ ಕಲಾದಂಡು ಚಿತ್ರದಲ್ಲಿ ಇದೆ ಎಂದರು.

ನಾಯಕ ವಿರಾಜ್ ಮಾತನಾಡಿ, ಸಿನಿಮಾ ಅನ್ನೋದು ಕನಸು, ದಾರಿ,ಜೀವನ. ಚಿಕ್ಕ ವಯಸ್ಸಿನಿಂದ ನಾನು ಇದನ್ನೇ ಅಂದುಕೊಂಡು ಬಂದಿದ್ದೇನೆ. ಈಗ ಅದನ್ನೇ ಫಾಲೋ ಮಾಡುತ್ತಿದ್ದೇನೆ. ನಮ್ಮ ಜೀವನದಲ್ಲಿ ಅಂದುಕೊಂಡ ಕೆಲಸ ಆಗುವುದಿಲ್ಲ. ಬೇರೆಯದ್ದೇ ಆಗುತ್ತದೆ. ಇದನ್ನು ದೇವರು ರುಜು ಮಾಡಿರುತ್ತಾನೆ. ಹ್ಯಾಪಿ ಬರ್ತಡೇ ಹಾಡಿಗೆ ಮಾಸ್ ರೂಪ ಕೊಟ್ಟಿದ್ದೇವೆ. ಇದು ಎಲ್ಲರ ಹುಟ್ಟುಹಬ್ಬಕ್ಕೆ ಬೇಕಾಗುವ ಹಾಡು. ಇದನ್ನು ಹೊರತುಪಡಿಸಿ ಬಹಳ ಅದ್ಭುತ ಹಾಡು ನಮ್ಮ ಚಿತ್ರದಲ್ಲಿ ಇದೆ ಎಂದರು.

Leave a Reply

Your email address will not be published. Required fields are marked *

error: Content is protected !!