ಉದಯವಾಹಿನಿ, ಬ್ಯಾಂಕಾಕ್: ಇಬ್ಬರು ಹೆಂಡ್ತಿರ ಮುದ್ದಿನ ಗಂಡʼ ಎಂಬ ಕನ್ನಡದ ಚಲನಚಿತ್ರವನ್ನು ನೋಡಿರುತ್ತೀರಿ. ಹಾಗೆಯೇ ಇಲ್ಲೊಬ್ಬಳು ಇಬ್ಬರು ಪುರುಷರನ್ನು ಗುಪ್ತವಾಗಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದಳು. ಒಂದು ವರ್ಷದವರೆಗೆ ಯಾವುದೇ ಅನುಮಾನ ಬಾರದಂತೆ ಇಬ್ಬರೊಂದಿಗೆ ಸಂಸಾರ ನಡೆಸಿದ್ದು ಮಾತ್ರ ವಿಚಿತ್ರವಾಗಿದೆ. ಮಲೇಷ್ಯಾದ ಮಹಿಳೆಯೊಬ್ಬಳು ಥಾಯ್ಲೆಂಡ್‍ನಲ್ಲಿ ನೆಲೆಸಿದ್ದು, ಇಬ್ಬರು ಗಂಡಂದಿರನ್ನು ಹೊಂದಿದ್ದಾಳೆ. ಒಬ್ಬಾತ ಡೇ ಶಿಫ್ಟ್ ಕೆಲಸ ಮಾಡುತ್ತಿದ್ದರೆ, ಇನ್ನೊಬ್ಬ ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ .

ಒಂದು ವರ್ಷದ ಬಳಿಕ ಪತ್ನಿಗೆ ಇಬ್ಬರು ಗಂಡಂದಿರು ಎಂಬ ವಿಚಾರ ಬಯಲಾಗಿದ್ದೇ ರೋಚಕ. ಮೊದಲ ಗಂಡನ ಸಹೋದರಿಗೆ ಈ ವಿಚಾರ ಗೊತ್ತಾಗಿದೆ. ಎರಡನೇ ಗಂಡನ ಜತೆ ವಿವಾಹವಾದ ರಿಜಿಸ್ಟ್ರೇಷನ್ ಪೇಪರ್ ಅನ್ನು ಸಹೋದರಿ ನೋಡಿ ಶಾಕ್ ಆಗಿದ್ದಾಳೆ. ಇದನ್ನು ಆಕೆ ತನ್ನ ಸಹೋದರನಿಗೆ ತೋರಿಸಿದ್ದಾಳೆ. ವಿವಾಹ ನೋಂದಣಿ ಪತ್ರವನ್ನು ನೋಡಿದ ಮೊದಲನೇ ಗಂಡ ಕೂಡ ಶಾಕ್ ಆಗಿದ್ದಾನೆ. ತಾನು ಒಂದು ವರ್ಷದಿಂದ ಸಂಸಾರ ನಡೆಸುತ್ತಿದ್ದು, ತನಗೆ ಏನೂ ಗೊತ್ತಾಗಲೇ ಇಲ್ಲವಲ್ಲ ಎಂದು ಅವಕ್ಕಾಗಿದ್ದಾನೆ. ತಾನು ಮತ್ತೊಬ್ಬನ ಜತೆ ಹೆಂಡತಿಯನ್ನು ಮತ್ತೊಬ್ಬನೊಂದಿಗೆ ಶೇರ್ ಮಾಡಿದ್ದೇನೆಂದು ತಿಳಿದು ಆಘಾತಗೊಂಡಿದ್ದಾನೆ.
ಮೊದಲನೇ ಗಂಡನ ಸಹೋದರಿ ಎಕಿನ್ ಹೇಳಿದ ಪ್ರಕಾರ, ಮಹಿಳೆ ಬಹಳ ಚಾಲಾಕಿಯಾಗಿದ್ದಳು ಎಂದು ಹೇಳಿದ್ದಾಳೆ. ಮೊದಲ ಗಂಡ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ, ಇನ್ನೊಬ್ಬಾತ ತನ್ನ ಮನೆಯಲ್ಲಿ ವಾಸಿಸುತ್ತಿದ್ದ. ಮೊದಲ ಗಂಡ ಡೇ ಶಿಫ್ಟ್ ಕೆಲಸ ಮಾಡುತ್ತಿದ್ದ. ಹೀಗಾಗಿ ಆಕೆ ರಾತ್ರಿ ಅವನೊಂದಿಗೆ ಕಾಲ ಕಳೆಯುತ್ತಿದ್ದಳು. ಮತ್ತೊಬ್ಬ ಗಂಡ ನೈಟ್ ಶಿಫ್ಟ್ ಕೆಲಸ ಮಾಡುತ್ತಿದ್ದ. ಬೆಳಗಾಗುತ್ತಲೇ ಆಕೆ ಎರಡನೇ ಗಂಡ ಮನೆಗೆ ಹೋಗುತ್ತಿದ್ದಳು. ಹೀಗಾಗಿ ಗಂಡಂದಿರಿಗೆ ಈ ಸಂಶಯವೇ ಬಂದಿರಲಿಲ್ಲ.

Leave a Reply

Your email address will not be published. Required fields are marked *

error: Content is protected !!