ಉದಯವಾಹಿನಿ, ಟೆಹ್ರಾನ್ : ಆರಂಭದಲ್ಲಿ ಮೋಟಾರ್ಬೈಕ್ ಓಡಿಸಲು ಕಲಿತಿರದ ಇರಾನಿನ ಮರಿಯಮ್ ಗೆಲಿಚ್, ಇದೀಗ ಅದರ ತರಬೇತಿ ನೀಡುವ ಟ್ರೈನರ್ಆಗಿದ್ದಾರೆ. ಲೈಸೆನ್ಸ್ ಇಲ್ಲದೇ ಆರಂಭದಲ್ಲಿ ರಾತ್ರಿ ಸಮಯದಲ್ಲಿ ಟೆಹ್ರಾನ್‌ನ ಖಾಲಿ ಬೀದಿಗಳಲ್ಲಿ ವಾಹನ ಚಲಾಯಿಸುತ್ತಿದ್ದರು ಇವರು.
ಕಳೆದ 15 ವರ್ಷಗಳಲ್ಲಿ ಗೆಲಿಚ್, ನೂರಾರು ಮಹಿಳೆಯರಿಗೆ ಈ ತರಬೇತಿ ನೀಡಿದ್ದು, ಅವರು ಟೆಹ್ರಾನ್‌ನ ದಟ್ಟವಾದ ಬೀದಿಗಳಲ್ಲಿ ಮಾತ್ರವಲ್ಲದೇ ಸಂಪ್ರದಾಯವಾದಿ ಇಸ್ಲಾಮಿಕ್ ಗಣರಾಜ್ಯದಲ್ಲಿ ಮಹಿಳಾ ಮೋಟಾರ್‌ಸೈಕ್ಲಿಸ್ಟ್‌ಗಳು ಎದುರಿಸುತ್ತಿರುವ ಅಡೆತಡೆಗಳನ್ನೂ ಮೀರಿ ಸಾಗಲು ಸಹಾಯ ಮಾಡಿದ್ದಾರೆ. ಅಲ್ಲದೇ ಗೆಲಿಚ್ ಇದೀಗ ಬೇಡಿಕೆಯ ತರಬೇತುದಾರರಾಗಿ ರೂಪುಗೊಂಡಿದ್ದಾರೆ.
ಈ ಕ್ರೀಡೆಯು ನನ್ನ ಪ್ಯಾಷನ್ ಆಗಿತ್ತು. ಇರಾನ್ನಲ್ಲಿ ಮೋಟರ್ಬೈಕ್ಗಳು ಕೇವಲ ಪುರುಷರಿಗೆ ಮಾತ್ರ ಎಂಬುದಾಗಿತ್ತು. ಇರಾನ್‌ನಾದ್ಯಂತ ಬೀದಿಗಳಲ್ಲಿ ವರ್ಣರಂಜಿತ ಹೆಲ್ಮೆಟ್‌ಗಳನ್ನು ಧರಿಸಿ ಮೊಪೆಡ್‌ಗಳು ಮತ್ತು ಮೋಟಾರ್‌ಬೈಕ್‌ಗಳಲ್ಲಿ ಮಹಿಳೆಯರು ಓಡಾಡುವುದು ಹೆಚ್ಚು ಸಾಮಾನ್ಯ ದೃಶ್ಯವಾಗಿದೆ. ಇದು ಕೆಲವು ತಿಂಗಳುಗಳಲ್ಲಿ ಸಾಮಾಜಿಕ ವರ್ತನೆಗಳಲ್ಲಿ ಸೂಕ್ಷ್ಮವಾದ ಆದರೆ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತಿದೆ.
ಈ ಕ್ಷೇತ್ರದಲ್ಲಿ ಮಹಿಳೆಯರು ಸಹ ಯಶಸ್ವಿಯಾಗಿ ಭಾಗವಹಿಸಬಹುದು ಎಂದು ನಾನು ಸಾಬೀತುಪಡಿಸಲು ಪ್ರಯತ್ನಿಸಿದೆ ಎಂದು ಇರಾನ್‌ನ ಮೋಟಾರ್‌ಸೈಕ್ಲಿಂಗ್ ಮತ್ತು ಆಟೋಮೊಬೈಲ್ ಫೆಡರೇಶನ್‌ನ ದೀರ್ಘಕಾಲದ ಸದಸ್ಯರಾಗಿರುವ 49 ವರ್ಷದ ಗೆಲಿಚ್ ಹೇಳಿದರು. ಫೆಡರೇಶನ್‌ನಲ್ಲಿ ಪ್ರಮಾಣೀಕೃತ ತರಬೇತುದಾರರಾಗಿರುವ ಗೆಲಿಚ್, ಬೆರಳೆಣಿಕೆಯಷ್ಟು ಮಹಿಳಾ ಸವಾರರಲ್ಲಿ ಒಬ್ಬರಾಗಿದ್ದಾರೆ. ಕಳೆದೊಂದು ದಶಕದಿಂದ ಆಗಿರುವ ಬದಲಾವಣೆಗಳ ಬಗ್ಗೆ ಅವರು ವಿವರಿಸಿದ್ದಾರೆ.
ನಮ್ಮ ಸಮಾಜದಲ್ಲಿ ಜನರ ದೃಷ್ಟಿಕೋನಗಳು ನಿಜವಾಗಿಯೂ ಬದಲಾಗಿವೆ. ಆರಂಭದಲ್ಲಿ ಈ ರೀತಿಯ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ನಗರ ಅಥವಾ ರೇಸಿಂಗ್ ಕೋರ್ಸ್‌ಗಳಿಗೆ ದಾಖಲಾಗುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಆರಂಭದಲ್ಲಿ ನಾವು ಮಹಿಳೆಯರಿಗೆ ಸವಾರಿ ತರಬೇತಿ ನೀಡಲು ಆರಂಭಿಸಿದಾಗ ಜನರು ಅದನ್ನು ಸ್ವೀಕರಿಸುತ್ತಿರಲಿಲ್ಲ. ಆದರೆ, ಈಗ ನನಗೆ ನಿಜವಾಗಿ ಸಂತೋಷವಾಗುತ್ತಿದೆ ಎಂದರು.
