ಉದಯವಾಹಿನಿ , ಸಿಯೋಲ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಯೂನ್​ ಸುಕ್​ ಯೋಲ್​ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ರಾಯಕೀಯ ಅಸ್ಥಿರತೆಗೆ ಕಾರಣವಾಗಿದ್ದ ಮಾರ್ಷಲ್​ ಲಾ ಜಾರಿಗೆ ತಂದ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. 2024ರ ಬಳಿಕ ಯೋಲ್​ ವಿರುದ್ಧದ ಕ್ರಿಮಿನಲ್​ ವಿಚಾರಣೆ ಮತ್ತು ಇತರೆ ಆರೋಪದ ಮೇಲೆ ವಿಧಿಸಲಾದ ಮೊದಲ ಶಿಕ್ಷೆ ಇದಾಗಿದೆ.
ಯೋಲ್​ ವಿರುದ್ಧ ಇರುವ ಪ್ರಮುಖ ಪ್ರಕರಣದಲ್ಲಿ ಕಳೆದ ವರ್ಷ ದಕ್ಷಿಣ ಕೊರಿಯಾದಲ್ಲಿ ಉಂಟಾಗಿದ್ದ ದಂಗೆಯಲ್ಲಿ ಮಾರ್ಷಲ್​ ಲಾ ಜಾರಿಗೆ ತಂದಿದ್ದು, ಇದು ಮರಣದಂಡನೆ ಗುರಿಯಾಗುವ ಸಾಧ್ಯತೆ ಇದೆ. ಶುಕ್ರವಾರ ಸಿಯೋಲ್​ ಸೆಂಟ್ರಲ್​ ಡಿಸ್ಟ್ರಿಕ್ಟ್​​ ಕೋರ್ಟ್​ ಇತರೆ ಆರೋಪದ ಮೇಲೆ ಯೋಲ್​ಗೆ ಶಿಕ್ಷೆ ವಿಧಿಸಿದೆ. ಬಂಧಿಸಲು ಬಂದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪವೂ ಇವರ ಮೇಲಿದೆ.
ಈ ಆದೇಶದ ವಿರುದ್ಧ ಯೂನ್​ ತಕ್ಷಣಕ್ಕೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಇದಕ್ಕೆ ಮುನ್ನ ಸ್ವಾತಂತ್ರ್ಯ ಮಂಡಳಿ ಯೂನ್​ ಅವರಿಗೆ 10 ವರ್ಷದ ಶಿಕ್ಷೆ ವಿಧಿಸುವಂತೆ ಬೇಡಿಕೆ ಇಟ್ಟಿತ್ತು. ಯೂನ್ ಅವರ ಪ್ರತಿವಾದಿ ತಂಡವು ಇದಕ್ಕೆ ಆಕ್ಷೇಪಿಸಿ, ಇದು ರಾಜಕೀಯ ಪ್ರೇರಿತ ಮತ್ತು ಅಂತಹ ಕಠಿಣ ಶಿಕ್ಷೆಗೆ ಒತ್ತಾಯಿಸಲು ಯಾವುದೇ ಕಾನೂನು ಆಧಾರಗಳಿಲ್ಲ ಎಂದು ಪ್ರತಿಪಾದಿಸಿತ್ತು.
ಡಿಸೆಂಬರ್ 2024ರಲ್ಲಿ ಯೂನ್ ರಾಯಕೀಯ ಬಿಕಟ್ಟಿಗೆ ಕಾರಣವಾದ ಮಾರ್ಷಲ್​ ಲಾ ಹೇರಿಕೆಯಿಂದಾಗಿ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಭಾರೀ ಸಾರ್ವಜನಿಕ ಪ್ರತಿಭಟನೆ ಉಂಟಾಯಿತು. ಈ ರಾಜಕೀಯ ಅಸ್ಥಿರತೆ ಬಳಿಕ ಅವರ ವಿರುದ್ಧ ದೋಷಾರೋಪಣೆ ಮಾಡಿ ಕಾನೂನು ಜಾರಿ ಅಧಿಕಾರಿಗಳು ಅವರನ್ನು ಬಂಧಿಸಿದರು. ಬಳಿಕ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಯಿತು. ಇವರ ಬಂಧನ ರಾಜಕೀಯದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕೂಡ ಕಾರಣವಾಗಿತ್ತು.
ತಮ್ಮ ವಿರುದ್ಧದ ಆರೋಪದ ವಿರುದ್ಧ ಸಮರ್ಥಿಸಿಕೊಂಡ ಯೂನ್​, ದೇಶವನ್ನು ದೀರ್ಘಕಾಲದವರೆಗೆ ಮಿಲಿಟರಿ ಆಡಳಿತದಲ್ಲಿ ಇರಿಸುವ ಉದ್ದೇಶವನ್ನು ಹೊಂದಿರಲಿಲ್ಲ. ತಮ್ಮ ಆದೇಶವು ಉದಾರವಾದಿ ನಿಯಂತ್ರಿತ ಸಂಸತ್ತಿನ ಅಪಾಯದ ಬಗ್ಗೆ ಜನರಿಗೆ ತಿಳಿಸುವ ಉದ್ದೇಶ ಹೊಂದಿತ್ತು. ಇದು ಅವರ ಕಾರ್ಯಸೂಚಿಗೆ ಅಡ್ಡಿಯಾಯಿತು. ಆದರೆ, ತನಿಖಾಧಿಕಾರಿಗಳು ಯೂನ್ ಅವರ ಆದೇಶಗಳು ಅವರ ಆಡಳಿತವನ್ನು ಬಲಪಡಿಸುವ ಮತ್ತು ವಿಸ್ತರಿಸುವ ಪ್ರಯತ್ನವೆಂದು ಪರಿಗಣಿಸಿದ್ದು, ದಂಗೆ, ಅಧಿಕಾರ ದುರುಪಯೋಗ ಮತ್ತು ಇತರ ಕ್ರಿಮಿನಲ್ ಅಪರಾಧಗಳ ಆರೋಪ ಹೊರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!