
ಉದಯವಾಹಿನಿ ದೇವರಹಿಪ್ಪರಗಿ: ತಾಲೂಕಿನ ಎಲ್ಲ ಸಹಾಯಕ ನಿರ್ದೇಶಕರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆ ಆಲಿಸಲು ಹೊಸದಾಗಿ (ಬಿ ಎಸ್ ಎನ್ ಎಲ್)ಸಿಯುಜಿ ಸಿಮ್ ಹಾಗೂ ನರೇಗಾ ಕೂಲಿಕಾರರು ಅಧಿಕಾರಿಗಳೊಂದಿಗೆ ಮಾತನಾಡಲು ಹೊಸದಾಗಿ ಸಹಾಯವಾಣಿ(9480831699)ಯನ್ನು ಆರಂಭಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನೀಲ ಎಮ್ ಮದ್ದಿನ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ತಾಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು ದಿನದ 24*7 ಘಂಟೆಗಳ ಕಾಲ ಚಾಲ್ತಿಯಲ್ಲಿರುವಂತೆ ಸಾರ್ವಜನಿಕರಿಂದ ಬರುವ ದೂರುಗಳನ್ನು ಆಲಿಸಲು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಅದರ ಜೊತೆಗೆ ಗ್ರಾಮೀಣ ಭಾಗದ ಜನರ ಗುಳೆ ತಪ್ಪಿಸುವ ಮತ್ತು ಅವರಿಗೆ ಉದ್ಯೋಗ ಖಾತ್ರಿ ನೀಡುವ ಮಹತ್ವಾಕಾಂಕ್ಷಿ ಯೋಜನೆ ಮನ್ರೇಗಾ ಕಾಮಗಾರಿಯ ಕುರಿತು ಜನರಿಗೆ ಮಾಹಿತಿ ಒದಗಿಸಲು ಇಲ್ಲವೇ ವಾಟ್ಸಪ್ ಮೂಲಕ ತಾಲೂಕಿನ ಎಲ್ಲಾ ಗ್ರಾಮೀಣ ಭಾಗದ ಜನರು ನರೇಗಾ ಕುರಿತಾದ ಮಾಹಿತಿ ಪಡೆದುಕೊಳ್ಳಲು ಜನರಿಗೆ ಅನುಕೂಲವಾಗಲೆಂದು ನರೇಗಾ ಸಹಾಯವಾಣಿ ಸಂಖ್ಯೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ದೇವರಹಿಪ್ಪರಗಿ ತಾಲೂಕು ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಬಿಎಸ್ಎನ್ಎಲ್ ಸೀಮ್ 24*7 ಚಾಲ್ತಿಯಲ್ಲಿ ಇರುವ ಸಂಖ್ಯೆಗಳನ್ನು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಅಧಿಕಾರಿಗಳ ಫೋನ್ ನಂಬರ್ ಕೆಳಗಿನಂತಿವೆ.
*ತಾಲೂಕ್ ಪಂಚಾಯತಿ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು*
1)ಕಾರ್ಯನಿರ್ವಾಹಕ ಅಧಿಕಾರಿಗಳು(9480831705),2) ಸಹಾಯಕ ನಿರ್ದೇಶಕರು(ಗ್ರಾ.ಉ)(9480831719) ,
3)ಸಹಾಯಕ ನಿರ್ದೇಶಕರು(ಪ.ರಾಜ್)(9480831733) ,
*ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು*
1) ಚಿಕ್ಕರೂಗಿ ಪಿಡಿಒ (9480831801),2) ಹರನಾಳ ಪಿಡಿಒ (9480831802),3) ಹಿಟ್ನಳ್ಳಿ ಪಿಡಿಒ (9480831803),4) ಹುಣಶ್ಯಾಳ ಪಿಡಿಒ (9480831804),5) ಜಾಲವಾದ ಪಿಡಿಒ (9480831805),6) ಕೆರೂಟಗಿ ಪಿಡಿಒ (9480831806),7) ಕೊಂಡಗೂಳಿ ಪಿಡಿಒ (9480831807),8) ಕೋರವಾರ ಪಿಡಿಒ (9480831808),9)ಮಣ್ಣೂರ ಪಿಡಿಒ (9480831809),10) ಮಾರ್ಕಬ್ಬಿನಹಳ್ಳಿ ಪಿಡಿಒ (9480831810),11) ಮುಳಸಾವಳಗಿ ಪಿಡಿಒ (9480831811),12) ಸಾತಿಹಾಳ ಪಿಡಿಒ (9480831812),13) ಯಾಳವಾರ ಪಿಡಿಒ (9480831813),14)ಯಲಗೋಡ ಪಿಡಿಒ (9480831814). ಸಾರ್ವಜನಿಕರಿಂದ ಬರುವ ದೂರುಗಳನ್ನು ಆಲಿಸಲು ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಾಪಂ ಇಒ ಸುನೀಲ ಮದ್ದಿನ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
