ಉದಯವಾಹಿನಿ,
ಚೀನಾ : ರಾಜಧಾನಿ ಬೀಜಿಂಗ್ ಸುತ್ತಮುತ್ತ ಆರ್ಭಟಕಾರಿ ರೀತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ರಸ್ತೆಗಳು ಕೊಚ್ಚಿಹೋಗಿವೆ. ಸದ್ಯ ಎಲ್ಲೆಡೆ ಕೊಳಕು ನೀರು ಶೇಖರಗೊಂಡಿದ್ದು, ಸಮಸ್ಯೆ ತಂದಿದೆ. ಪ್ರವಾಹದಿಂದಾಗಿ ಈಗಾಗಲೇ ಕನಿಷ್ಠ ೨೦ ಮಂದಿ ಮೃತಪಟ್ಟಿದ್ದು ೨೭ ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ. ಮೃತಪಟ್ಟವರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ೧೪೦ ವರ್ಷಗಳ ಹಿಂದೆ ಆರಂಭವಾದ ಮಳೆಯ ದಾಖಲೆ ಪ್ರಮಾಣದಲ್ಲಿ ಸುರಿದಿದೆ. ಬೀಜಿಂಗ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ತ್ಯಾಜ್ಯ ತುಂಬಿದ ಪ್ರವಾಹದ ನೀರು ಸದ್ಯ ಬೀಜಿಂಗ್‌ನ ಉಪನಗರದಲ್ಲಿರುವ ಉದ್ಯಾನವನದಲ್ಲಿ ತುಂಬಿದೆ. ಅಲ್ಲದೆ ರಾಜಧಾನಿ ಬೀಜಿಂಗ್‌ನ ನೈಋತ್ಯಕ್ಕೆ ಹೆಬೈ ಪ್ರಾಂತ್ಯದ ಪ್ರಮುಖ ಬೀದಿಗಳು ಸದ್ಯ ನದಿಗಳಂತಾಗಿದೆ. ಹಲವು ಮರಗಳು ಉರುಳಿಬಿದ್ದ ಕಾರಣ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
