ಉದಯವಾಹಿನಿ, ತುಳಸಿ ಎಲೆಯ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹಾಗೂ ದಂತಗಳ ರಕ್ಷಣೆಯಾಗುತ್ತದೆ.
೨. ತುಳಸಿ ಎಲೆಗಳನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಬಾಯಿಹುಣ್ಣುಗಳು ಗುಣವಾಗುತ್ತವೆ.
೩. ವಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ, ಈರುಳ್ಳಿಯನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿ ಮೆದುವಾಗಿ ತಿಕ್ಕಿದರೆ ರಕ್ತಸ್ರಾವ ನಿಲ್ಲುವುದು. ಚೆನ್ನಾಗಿ ಅಗಿದು ತಿನ್ನುವುದರಿಂದ ದಂತಕ್ಷಯ ನಿವಾರಣೆಯಾಗುತ್ತದೆ. ೪. ಅರಿಶಿನದ ಕೊಂಬನ್ನು ಸುಟ್ಟು ಭಸ್ಮ ಮಾಡಿ ಈ ಭಸ್ಮವನ್ನು ಜರಡಿ ಹಿಡಿದು ನುಣುಪಾದ ಪುಡಿಗೆ ಉಪ್ಪು ಬೆರೆಸಿ ಹಲ್ಲುಜ್ಜುತ್ತಾ ಬಂದರೆ ಹಲ್ಲುಗಳು ದೃಢವಾಗುತ್ತವೆ, ದಂತಕ್ಷಯ ನಿವಾರಣೆ, ಹಲ್ಲುನೋವಿಗೆ ವಿದಾಯ. ೫. ನೇರಳೆ ಗಿಡದ ಎಳೆಯ ಎಲೆಗಳನ್ನು ಚೆನ್ನಾಗಿ ಅಗಿದು ಉಗಿಯುತ್ತಾ ಬಂದರೆ ವಸಡಿನಲ್ಲಿ ರಕ್ತ ಬರುವುದು, ಹಲ್ಲು ಹುಳುಕಾಗುವುದು, ಈ ರೀತಿಯ ಹಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ, ಬಾಯಿ ವಾಸನೆ ಕಡಿಮೆ ಆಗುತ್ತದೆ.
೬. ಹಳದಿ ಬಣ್ಣದ ಹಲ್ಲಿಗೆ ನಿಂಬೆಸಿಪ್ಪೆಗಳನ್ನು ಸಂಗ್ರಹ ಮಾಡಿ ಒಣಗಿಸಿ ಸುಟ್ಟು ಭಸ್ಮ ಮಾಡಿ ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಪ್ರತಿನಿತ್ಯ ಹಲ್ಲುಜ್ಜುತ್ತಾ ಬಂದರೆ ಹಲ್ಲುಗಳು ಫಳಫಳಾ ಅಂತ ಹೊಳೆಯುತ್ತವೆ, ದೃಢವಾಗಿಯೂ ಇರುತ್ತವೆ.
೭. ಬಾಯಿಹುಣ್ಣು: ಗುಲಾಬಿ ದಳಗಳಿಂದ ಮಾಡಿದ ಗುಲ್ಕನ್ ತಿನ್ನುತ್ತಾ ಬಂದರೆ ಬಾಯಿಹುಣ್ಣು ಗುಣವಾಗುತ್ತದೆ.
೮. ಏಲಕ್ಕಿಯನ್ನು ಸಿಪ್ಪೆ ಸಹಿತವಾಗಿ ನೀರಿನಲ್ಲಿ ಕಷಾಯ ಮಾಡಿ ಶೋಧಿಸಿ ಬಾಯಿ ಮುಕ್ಕಳಿಸುತ್ತಾ ಬಂದರೆ ಹಲ್ಲುನೋವು ನಿವಾರಣೆಯಾಗುತ್ತದೆ.
೯. ಅರಳಿಮರದ ಎಲೆಯ ರಸದಲ್ಲಿ ಅದೇ ಮರದ ತೊಗಟೆಯನ್ನು ತೇಯ್ದು ಹುಣ್ಣಿರುವ ಭಾಗಕ್ಕೆ ಲೇಪಿಸಿ.
೧೦. ಅತಿಮಧುರವನ್ನು ಜೇನುತುಪ್ಪದಲ್ಲಿ ತೇಯ್ದು ಲೇಪಿಸುವುದು.
೧೧. ಸೀಬೆಹಣ್ಣಿನ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಶೋಧಿಸಿ ಆ ನೀರಿನಲ್ಲಿ ಬಾಯಿ ಮುಕ್ಕಳಿಸುತ್ತಿದ್ದರೆ ಹಲ್ಲುನೋವು, ಹಲ್ಲಿನಲ್ಲಿ ರಕ್ತ ಬರುವುದು, ಹಲ್ಲು ಹುಳುಕಾಗುವುದು ಎಲ್ಲವೂ ತಪ್ಪುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.
