ಉದಯವಾಹಿನಿ, ನ್ಯೂಯಾರ್ಕ್: ಇಂದಿನ ವೈಜ್ಞಾನಿಕ ಯುಗದಲ್ಲಿ ದಿನದಿಂದ ದಿನಕ್ಕೆ ಮಾನವ ತನ್ನ ಕೌಶಲ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತಿದ್ದು, ಇದಕ್ಕೀಗ ಮತ್ತೊಂದು ತಾಜಾ ಉದಹರಣೆ ಲಭಿಸಿದೆ. ಅದೂ ಅಲ್ಲದೆ ಭೂಮಿಯ ಮೇಲಿನ ಆರಂಭಿಕ ಜೀವದ ಉಗಮದ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳು ಇದೀಗ ವೀರ್ಯ ಅಥವಾ ಮೊಟ್ಟೆ (ಹೆಣ್ಣು)ಯನ್ನು ಬಳಸದೆಯೇ ಮಾನವ ಭ್ರೂಣದ ಸಂಪೂರ್ಣ ಮಾದರಿಯನ್ನು ಸೃಷ್ಟಿಸಿದ್ದು, ಜಾಗತಿಕ ಮಟ್ಟದಲ್ಲಿ ಕೌತುಕ ಮೂಡಿಸಿದೆ.
ವೈಜ್‌ಮನ್ ಇನ್‌ಸ್ಟಿಟ್ಯೂಟ್ ತಂಡದ ವಿಜ್ಞಾನಿಗಳು ವೀರ್ಯ, ಮೊಟ್ಟೆಗಳು ಅಥವಾ ಗರ್ಭಾಶಯವನ್ನು ಬಳಸದೆಯೇ ಆರಂಭಿಕ ಮಾನವ ಭ್ರೂಣವನ್ನು ಹೋಲುವ ಘಟಕವನ್ನು ಬೆಳೆಸಿದ್ದಾರೆ. ಅದರಲ್ಲೂ ಅಚ್ಚರಿಯ ರೀತಿ ಎಂಬಂತೆ ಇವುಗಳು ಪ್ರಯೋಗಾಲಯದಲ್ಲಿ ಗರ್ಭಧಾರಣೆಯ ಪರೀಕ್ಷೆಯನ್ನು ಧನಾತ್ಮಕವಾಗಿ ಪರಿವರ್ತಿಸುವ ಹಾರ್ಮೋನುಗಳನ್ನು ಕೂಡ ಬಿಡುಗಡೆ ಮಾಡಿದೆ. ಮುಖ್ಯವಾಗಿ ವೈಜ್‌ಮನ್ ಇನ್‌ಸ್ಟಿಟ್ಯೂಟ್ ತಂಡವು “ಭ್ರೂಣ ಮಾದರಿ” ಕಾಂಡಕೋಶಗಳನ್ನು ಬಳಸಿ ಮಾಡಲ್ಪಟ್ಟಿದೆ, ಇದು ನಿಜವಾದ ೧೪ ದಿನಗಳ ಭ್ರೂಣದಂತೆ ಗೋಚರಿಸಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!