ಉದಯವಾಹಿನಿ, ಬೆಂಗಳೂರು: ಕೋವಿಡ್ ವೇಳೆ ನಡೆದಿರುವ ಬಹುಕೋಟಿ ಹಗರಣ ಬಗ್ಗೆ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆಯ ಅಕ್ರಮ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ದೂರು ಕೊಟ್ಟಿದ್ದಾರೆ.
ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್‌ಎಂಎಸ್‌ಸಿಎಲ್) ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಬಯೋಮೆಡಿಕಲ್ ಟೆಂಡರ್‌ನಲ್ಲಿ ಅಕ್ರಮವೆಸಗಿದ ಆರೋಪದಡಿ ಅಮಾನತು ಆಗಿದ್ದ ಅಧಿಕಾರಿ ಡಾ.ಸ್ವತಂತ್ರ ಆರ್. ಬಣಕಾರ್, ಗುತ್ತಿಗೆದಾರರ ಚಂದ್ರಪ್ಪ ಎಂಬುವರು ಸಚಿವ ದಿನೇಶ್ ಗುಂಡೂರಾವ್ ಹೆಸರಿನಲ್ಲಿ ಕಂಪನಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಇ- ಮೇಲ್ ಮೂಲಕ ಐದು ಪುಟಗಳ ಒಳಗೊಂಡ ದೂರು ಕೊಟ್ಟಿದ್ದಾರೆ.
ನಿಗಮವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಇವರಿಬ್ಬರು ಕಂಪನಿಗಳ ಪೂರೈಕೆದಾರರಿಗೆ ಕರೆ ಮಾಡಿ ಲಂಚ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಕೆಲವರಿಂದ ಈಗಾಗಲೇ ಕೋಟ್ಯಂತರ ರೂಪಾಯಿ ಲಂಚ ವಸೂಲಿ ವಚಿiಡಲಾಗಿದೆ.
ಕಮಿಷನ್ ನೀಡುವವರಿಗೂ ಟೆಂಡರ್ ಅಂತಿಮಗೊಳಿಸದಂತೆ ಹಾಗೂ ಪೂರೈಕೆ ಆದೇಶಗಳ ವಿತರಣೆ ನಿಧಾನಗಳಿಸುವಂತೆ ನಿಗಮದ ಅಧಿಕಾರಿಗಳಿಗೆ ತಾಕೀತು ಮಾಡಿರುವುದು ಸೇರಿ ಇತ್ಯಾದಿ ಮಾಹಿತಿಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
