ಉದಯವಾಹಿನಿ,ಸೈದಾಪೂರ: ಪಟ್ಟಣದ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತಾ ಡಾ. ಸರ್ವೆಪಲ್ಲಿ ರಾಧಾಕೃಷ್ಣನರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮಕ್ಕಳು ಶಿಕ್ಷಕವೃಂದಕ್ಕೆ ಆಟೋಟಗಳನ್ನು ಆಡಿಸಿ ಕೇಕ್ ಕತ್ತರಿಸುವ ಮೂಲಕ ಶಿಕ್ಷಕರೊಂದಿಗೆ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಖ್ಯಗುರು ವೆಂಕಟೇಶ ಸಗರ ಮಾತನಾಡಿ, ನಮಗೆ ಶಿಸ್ತು, ವಿದ್ಯೆ ಮತ್ತು ಬುದ್ದಿಯನ್ನು ಕಲಿಸಿ, ನಮ್ಮ ಮುಂದಿನ ದಿನಗಳ ಜೀವನದ ಹಾದಿಯನ್ನು ರೂಪಿಸಿಕೊಟ್ಟಂತಹ ಶಿಕ್ಷಕರನ್ನು ನಾವು ಎಂದಿಗೂ ಮರೆಯಬಾರದು. ನಮ್ಮ ಪ್ರತಿಯೊಂದು ಕಾರ್ಯಸಾಧನೆಯಲ್ಲಿ ತಿಳಿ ಹೇಳಿದವರನ್ನು ಕೂಡ ಗೌರವದಿಂದ ಕಾಣಬೇಕು ಎಂದು ಹೇಳಿದರು. ಶಿಕ್ಷಕರಾದ ಸುನೀತಾ, ವನಜಾಕ್ಷೀ, ಸಂಗೀತ, ಗೌರಿಶ್ರೀ ಸೇರಿದಂತೆ ಇತರರಿದ್ದರು.
