ಉದಯವಾಹಿನಿ , ಮುಂಬೈ: ಮುಂಬೈ ಸಾರಿಗೆಯ ಮಾತು ಬಂದಾಗಲೆಲ್ಲ ಎರಡು ಚಿತ್ರಗಳು ನೆನಪಿಗೆ ಬರುತ್ತವೆ.ಮೊದಲನೆಯದು ಮುಂಬೈ ಲೋಕಲ್ ಮತ್ತು ಎರಡನೆಯದಾಗಿ ಮುಂಬೈನಲ್ಲಿ ಓಡುತ್ತಿರುವ ಕೆಂಪು ಬಣ್ಣದ ಡಬಲ್ ಡೆಕ್ಕರ್ ಬಸ್ಸುಗಳು.
ಮುಂಬೈನಲ್ಲಿ ಪ್ರತಿದಿನ ಸಾವಿರಾರು ಜನರು ಡಬಲ್ ಡೆಕ್ಕರ್ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ ನಿನ್ನೆ ಕೆಂಪು ಬಣ್ಣದ ಡಬಲ್ ಡೆಕ್ಕರ್ ಬಸ್‌ಗಳು ತಮ್ಮ ಕೊನೆಯ ಪ್ರಯಾಣ ಮಾಡಿದವು .
ಹಳೆಯ ಡಬಲ್ ಡೆಕ್ಕರ್ ಬಸ್ ಮುಂಬೈನ ರಸ್ತೆಗಳಲ್ಲಿ ಕೊನೆಯ ಬಾರಿಗೆ ಓಡಿತು. ಈಗ ಈ ಹಳೆಯ ಡಬಲ್ ಡೆಕ್ಕರ್ ಬಸ್‌ಗಳು ರಸ್ತೆಗಳಲ್ಲಿ ಕಾಣದೇ ಇತಿಹಾಸದ ಪುಟ ಸೇರಲಿವೆ.ಬ್ರಿಟಿಷರ ಕಾಲದಿಂದ ಓಡುತ್ತಿದ್ದ ಈ ಬಸ್‌ಗಳು ಇನ್ನು ಮುಂದೆ ಓಡುವುದಿಲ್ಲ. ೧೯೩೭ ರಲ್ಲಿ, ಬ್ರಿಟಿಷರು ಮುಂಬೈನಲ್ಲಿ ಮೊದಲ ಡಬಲ್ ಡೆಕ್ಕರ್ ಬಸ್ ಓಡಿಸಿದರು. ಅಂದಿನಿಂದ ಇದು ಸಾರಿಗೆಯ ಪ್ರಮುಖ ಸಾಧನವಾಯಿತು.
