ಉದಯವಾಹಿನಿ, ನಟಿ ರಶ್ಮಿಕಾ ಮಂದಣ್ಣ ಅವರ ಕೈ ತುಂಬ ಆಫರ್ಗಳಿವೆ. ಸದ್ಯಕ್ಕಂತೂ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅನಿಮಲ್, ಪುಷ್ಪ 2, ಛಾವಾ ಮುಂತಾದ ಸಿನಿಮಾಗಳ ಮೂಲಕ ಅವರು ಭಾರಿ ಯಶಸ್ಸು ಕಂಡಿದ್ದಾರೆ. ಅವರು ಕೇಳಿದಷ್ಟು ಸಂಭಾವನೆ ನೀಡಲು ನಿರ್ಮಾಪಕರು ಸಿದ್ಧರಿದ್ದಾರೆ. ಸ್ಟಾರ್ ಹೀರೋಗಳಿಗೆ ರಶ್ಮಿಕಾ ಮಂದಣ್ಣ ಅವರು ಲಕ್ಕಿ ಹೀರೋಯಿನ್ ಆಗಿದ್ದಾರೆ. ಈ ನಡುವೆ ಅವರು ಹೊಸ ಬಿಸ್ನೆಸ್ ಆರಂಭಿಸುತ್ತಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ತಾಯಿಯ ಆಶೀರ್ವಾದ ಪಡೆದುಕೊಂಡಿದ್ದಾರೆ.
ಈಗ ರಶ್ಮಿಕಾ ಮಂದಣ್ಣ ಅವರಿಗೆ 29 ವರ್ಷ ವಯಸ್ಸು. ಕನ್ನಡ ಚಿತ್ರರಂಗದಿಂದ ಶುರುವಾದ ಅವರ ಸಿನಿಜರ್ನಿ ಬಾಲಿವುಡ್ ತಲುಪಿದೆ. ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2016ರಲ್ಲಿ. ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’ ಸೂಪರ್ ಹಿಟ್ ಆಯಿತು. ಅದಾಗಿ 10 ವರ್ಷ ಕಳೆಯುವುದರೊಳಗೆ ರಶ್ಮಿಕಾ ಮಂದಣ್ಣ ಅವರು ಟಾಪ್ ಹೀರೋಯಿನ್ ಆಗಿ ಮಿಂಚಿದರು.
