ಉದಯವಾಹಿನಿ, ದೆಹಲಿ: ಮದುವೆ ಸಮಾರಂಭಗಳು ಸಾಮಾನ್ಯವಾಗಿ ಸಂತೋಷ, ನಗು ಮತ್ತು ಸರ್‌ಪ್ರೈಸರ್‌ಗಳಿಂದ ತುಂಬಿರುತ್ತವೆ. ಅತಿಥಿಗಳು ಹೊಸ-ಹೊಸ ಉಡುಪು ಧರಿಸಿ ಕಂಗೊಳಿಸುತ್ತಾರೆ. ವಧು-ವರರು ಕೂಡ ತುಂಬಾ ಚೆನ್ನಾಗಿ ಸಿಂಗರಿಸಿಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅತ್ಯಂತ ಎಚ್ಚರಿಕೆಯಿಂದ ಯೋಜಿಸಲಾದ ಮದುವೆಗಳು ಅನಿರೀಕ್ಷಿತ ತಿರುವು ಪಡೆಯಬಹುದು ಇದು ಎಲ್ಲರನ್ನೂ ಆಘಾತಗೊಳಿಸುತ್ತದೆ.
ಅಂತಹ ಒಂದು ಮದುವೆಯಲ್ಲಿ, ಆಹ್ವಾನಿಸದ ಅತಿಥಿಯೊಬ್ಬರು ಆಗಮಿಸುವವರೆಗೂ ಎಲ್ಲವೂ ಸಾಮಾನ್ಯವಾಗಿಯೇ ಇತ್ತು. ಅದ್ಯಾರು ಅತಿಥಿ ಎಂದು ಅಚ್ಚರಿ ಪಡುತ್ತಿದ್ದೀರೆ..? ಅದ್ಯಾರೋ ವಧುವಿನ ಅಥವಾ ವರನ ಮಾಜಿ ಸಂಗಾತಿಯಲ್ಲ. ಅದ್ಧೂರಿ ಮದುವೆಗೆ ಕರೆಯದೇ ಬಂದ ಅತಿಥಿಯಿವರು. ಅದು ಬೇರ್ಯಾರು ಅಲ್ಲ, ಗೂಳಿ. ಕೆಲವೇ ಸೆಕೆಂಡುಗಳಲ್ಲಿ, ಮಂಟಪವು ಅವ್ಯವಸ್ಥೆಯಿಂದ ಕೂಡಿತು. ಪ್ರಶಾಂತ ಸಮಾರಂಭವಾಗಬೇಕಿದ್ದ ಸ್ಥಳ ಸಂಪೂರ್ಣ ಗೊಂದಲದ ಗೂಡಾಯಿತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
