ಉದಯವಾಹಿನಿ, ಜೈಪುರ: ಇತ್ತೀಚಿನ ವರ್ಷದಿಂದ ಹೃದಯಾಘಾತ ಆಗುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಈ ಹೃದಯಾಘಾತ ಕಾಡುತ್ತದೆ. ಬದಲಾದ ಜೀವನ ಶೈಲಿ, ಪೌಷ್ಟಿಕಾಂಶಯುಕ್ತ ಆಹಾರ ಸಮಸ್ಯೆ, ಜಂಕ್ ಫುಡ್ ಸೇವನೆ, ದೈಹಿಕ ಮತ್ತು ಮಾನಸಿಕ ಒತ್ತಡ ಇತರ ಸಮಸ್ಯೆಗಳು ಹೃದಯಾಘಾತಕ್ಕೆ ಮುಖ್ಯ ಕಾರಣ ಎನನುತ್ತಾರೆ ತಜ್ಞರು. ಇತ್ತೀಚೆಗಷ್ಟೆ ಉದ್ಯಮಿಯೊಬ್ಬರು ಆಭರಣ ಮಳಿಗೆಯಲ್ಲಿ ವ್ಯವಹಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದ ಘಟನೆ ಜೈಪುರದಲ್ಲಿ ನಡೆದಿದೆ. ಅವರು ನೋಡ ನೋಡುತ್ತಿದ್ದಂತೆ ಕುಸಿದುಬಿದ್ದಿದ್ದು, ಆಭರಣ ಮಳಿಗೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿದೆ. ಉದ್ಯಮಿಯು ಕುಸಿದು ಬಿದ್ದಂತೆ ಅಲ್ಲಿದ್ದವರೆಲ್ಲ ಗೊಂದಲಕ್ಕೊಳಗಾಗಿದ್ದಾರೆ. ಬಳಿಕ ಕುಸಿದು ಬಿದ್ದ ವ್ಯಕ್ತಿಯನ್ನು ನೆಲದ ಮೇಲೆ ಮಲಗಿಸಿ ಸಿಪಿಆರ್ ಪ್ರೊಸೆಸ್ ಮಾಡುವ ಮೂಲಕ ಆ ವ್ಯಕ್ತಿಯನ್ನು ಬದುಕಿಸಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಜೈಪುರದ ರಾಂಪುರ ಬಜಾರ್‌ನಲ್ಲಿರುವ ವರ್ಧಮಾನ್ ಜ್ಯುವೆಲ್ಲರ್ಸ್‌ಗೆ ಡಿಸೆಂಬರ್ 11ರ ಮಧ್ಯಾಹ್ನ 1.58ರ ಸುಮಾರಿಗೆ 60 ವರ್ಷದ ಜೈಪುರದ ಉದ್ಯಮಿಯೊಬ್ಬರು ಭೇಟಿ ನೀಡಿದರು. ಈ ವೇಳೆ ಮಾಲಕರು ಆ ಉದ್ಯಮಿಯೊಂದಿಗೆ ಚರ್ಚಿಸುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಅವರು ನಿಶ್ಯಕ್ತಿ ಸಮಸ್ಯೆಗೆ ಒಳಗಾಗಿ ಬಳಿಕ ಕುಸಿದುಬಿದ್ದಿದ್ದ ಆಘಾತಕಾರಿ ದೃಶ್ಯಗಳು ಆಭರಣ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
