ಉದಯವಾಹಿನಿ, ಕೊಯಮತ್ತೂರು : ಕಳೆದ ವರ್ಷ ಅಕ್ಟೋಬರ್ ೨೩ ರಂದು ಕೊಟ್ಟೈಮೇಡುವಿನ ಸಂಗಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣ ಸಂಬಂಧ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸುವ ಮೂಲಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ಚುರುಕುಗೊಳಿಸಿದೆ.
ಎರಡು ದಿನಗಳ ತೀವ್ರ ವಿಚಾರಣೆಯ ಬಳಿಕ ದಕ್ಷಿಣ ಉಕ್ಕಡಂನ ಜಿಎಂ ನಗರದ ನಿವಾಸಿ ಮೊಹಮ್ಮದ್ ಇದ್ರಿಸ್ (೨೫)ನ್ನು ಬಂಧಿಸಿ, ವಿಚಾರಣೆ ನೆಡಸಲಾಗಿದೆ. ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ಬಂಧಿತ ಇದ್ರಿಸ್, ಕೊಟ್ಟೈಮೇಡುವಿನ ಹೆಚ್‌ಎಂಪಿಆರ್ ಸ್ಟ್ರೀಟ್‌ನ ಜಮೀಶಾ ಮುಬೀನ್ (೨೯) ಎಂಬ ಆತ್ಮಹತ್ಯಾ ಬಾಂಬರ್ ನಿಕಟ ಸಹಚರ ಎನ್ನುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ಕಾರು ಬಾಂಬ್ ಸ್ಫೋಟದ ಹಿಂದಿನ ಕ್ರಿಮಿನಲ್ ಪಿತೂರಿಯಲ್ಲಿ ಈತನ ಕೈವಾಡವಿದೆ. ಇದ್ರಿಸ್ ವಿರುದ್ಧ ಮೂರು ವರ್ಷದ ಕರೆ ದಾಖಲೆಗಳು ಸೇರಿದಂತೆ ಕೆಲ ಅಗತ್ಯ ಮಾಹಿತಿಯನ್ನು ರಾಷ್ಟ್ರೀಯ ಗುಪ್ತಚರ ಸಂಸ್ಥೆಅಧಿಕಾರಿಗಳು ಕಲೆಹಾಕುವ ಮೂಲಕ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. 
